ಅಜರ್‍ಬೈಜಾನ್-
ನೈಋತ್ಯ ಏಷ್ಯಾ ಮತ್ತು ಯುರೋಪ್‍ನಲ್ಲಿರುವ ಒಂದು ಸ್ವತಂತ್ರ ಗಣರಾಜ್ಯ. ರಷ್ಯಾಕ್ಕೆ ಸೇರಿದ್ದ ಇದು 1991ರಲ್ಲಿ ಸ್ವತಂತ್ರವಾಯಿತು. ಉಳಿದವಕ್ಕಿಂತ ಕೈಗಾರಿಕೆಯಲ್ಲಿ ಹೆಚ್ಚು ಮುಂದುವರಿದಿದೆ. ಯೂರೋಪಿನ ರಷ್ಯದ ಅತ್ಯಂತ ದಕ್ಷಿಣಭಾಗದಲ್ಲಿದೆ. (ಉತ್ತರ ಅಕ್ಷಾಂಶ 390 ಮತ್ತು 420). ಪೂರ್ವದಲ್ಲಿ ಕ್ಯಾಪ್ಸಿಯನ್ ಸಮುದ್ರ, ದಕ್ಷಿಣದಲ್ಲಿ ಇರಾನ್, ಪಶ್ಚಿಮದಲ್ಲಿ ಆರ್ಮೀನಿಯನ್ ಗಣರಾಜ್ಯ, ಉತ್ತರದಲ್ಲಿ ಜಾರ್ಜಿಯ ರಷ್ಯ ಗಣರಾಜ್ಯಗಳಿವೆ. ಉತ್ತರ ದಕ್ಷಿಣವಾಗಿ 385 ಕಿ.ಮೀ. ಪೂರ್ವ ಪಶ್ಚಿಮವಾಗಿ 475 ಕಿ.ಮೀ. ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿ.ಮೀ. ಜನಸಂಖ್ಯೆ 79,69,000(2000) ಬಾಕು ಮುಖ್ಯಪಟ್ಟಣ; ಆಡಳಿತಕೇಂದ್ರ; ವ್ಯಾಪಾರ ಕೈಗಾರಿಕೆ ಹಾಗೂ ವಿದ್ಯಾಕೇಂದ್ರ. ಇಲ್ಲಿ ಒಂದು ವಿಶ್ವವಿದ್ಯಾನಿಲಯವಿದೆ. ದೇಶ ಪೆಟ್ರೋಲ್ ಎಣ್ಣೆಗೆ ಪ್ರಸಿದ್ಧವಾಗಿದೆ. 90%ರಷ್ಟು ರಾಷ್ಟ್ರೀಯ ವರಮಾನ ಈ ಎಣ್ಣೆಯಿಂದ ಬರುತ್ತದೆ. ಜನಸಂಖ್ಯೆಯಲ್ಲಿ 40% ಮಾತ್ರ ವ್ಯವಸಾಯವಲಂಬಿಗಳು.	
													
(ಎಸ್.ಎನ್.1.)
(ಪರಿಷ್ಕರಣೆ: ಬಿಶಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ